ಕವಿತೆಗಳ ಹಾದಿಯಲ್ಲಿ
ಸಾಗಿರುವ ನಿಮ್ಮ ಬಂಡಿಯಲ್ಲಿ
ಕುಳಿತುಕೊಳ್ಳಲು ಒಂದಿನಿತು
ಜಾಗ ನೀಡಿ,
ದುಡ್ಡು ಕೇಳಲು ನೀವು
ಬಂಡಿಯ ನಿರ್ವಾಹಕನಲ್ಲ,
ನೀಡಲು ನಾನೇನು
ಪ್ರಯಾಣಿಕನಲ್ಲ
ಸ್ನೇಹದ ಕೊಂಡಿಯಲ್ಲಿ
ನೀವು ತೂಗುತಿದ್ದಿರಿ,
ಆತ್ಮೀಯನಿಗೆ ಬೇಸರವಯಿತೇನೋ
ಎಂದೆನಿಸಿ ನಾನೂ ಕೂಡಿಕೊಂಡೆ...
ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!
Tuesday, 1 May 2012
ಹುತ್ತ...
ನಿನ್ನ ಕಟ್ಟಿದ್ದು ಗೆದ್ದಲು
ಆದರೂ ನಿನಗೆ ಸೋಲು
ರಂಧ್ರ ಹೊತ್ತ ಹುತ್ತ
ನಿನ್ನ ಸುತ್ತ ಹಾವುಗಳ ಚಿತ್ತ!
ದೇಹ ಪೂರ್ತಿ ತಡವಿಕೊಂಡೆ... ಸುಮಾರು ರಂಧ್ರಗಳಿವೆ ದೇಹದ ಹುತ್ತದೊಳಗೆ...
ReplyDelete