ಉಣ್ಣುವ ಬಾಯಿ ಮರೆತು
ಉತ್ತವ ಎದೆ ಸೆಟೆಸಿ ಎತ್ತುಗಳು ತಲೆ ಸವರಿದ
ಭೂ ಎದೆ ಗಾಯ ಇನ್ನೂ ಮಾಗಿರಲಿಲ್ಲ
ಮತ್ತೆ ಉಳುಮೆ ಕೆತ್ತಿ ಅವಳುದರ
ಎರಡು ವರ್ಷದಲ್ಲಿ ಅವ ಸಿರಿವಂತ ಜಮೀನ್ದಾರ
ತಾಜ್ ಮಹಲ್ ಮೇಲೆ ಪ್ರೇಮ ರಕ್ತ
ಅಡರಿದ್ದು ಕಾಣಲಿಲ್ಲ
ಉಳಿ ಕೈ ಗಳ ಹನಿ ರಕ್ತ ತೊಟ್ಟು
ಈಗಲೂ ಹರಿಯುತ್ತಿದೆ
ಷಹಜಹಾನ್ ಮುಖ ಬೆಳಗಿಸಿ
ಬೆಳಗಿಸಿಕೊಂಡವನಿಗೆ ರುಚಿ ರಕ್ತ ಕಣ
ವಿಧಾನ ಸೌಧವನ್ನು ನಿಧಾನವಾಗಿ
ಕೆತ್ತಿದ ಕೈಗಳು ಪ್ರೇಕ್ಷಕ
ಉದ್ಘಾಟಕನೇ ನಾಯಕ ಮಾಲೀಕ
ಶರಬತ್ತು ಪೀರಿ ಹಾಯಾದವನ
ಚಪ್ಪಲಿಯೊತ್ತಡಕ್ಕೆ ಮುರುಟು ನಿಂಬೆ
ಸಕ್ಕರೆ ನೀಡಿದ ಕಬ್ಬಿನ ಮೈಗೆ ಲೋಕ ಬೆಂಕಿ
ಜಗ ಕ್ಯಾಮರಾದ ಮರೆತ ಗಿಂಡಿಯಲ್ಲಿ
ಕೋಟಿ ಕೋಟಿ ಅನಾಮಧೇಯರು
ನಿಂತಿದ್ದಾರೆ ಹನಿಸಿ ಬೆವರು
ನುಣುಪು ರಸ್ತೆ ಮೇಲೆ ಮಲಗಿ
ಕಾಂಕ್ರೀಟ್ ನಾಡ ಮೇಲೆಲ್ಲಾ ತಮ್ಮನ್ನೇ ತೂಗಿ
ವೈಭಕ್ಕೆ ಬಣ್ಣ ಬಳಿದಿದ್ದಾರೆ ಚೆಲ್ಲಿ ಚಿತ್ತಾರ
ಪಾತಾಳದಾಳದಲ್ಲಿ ಹರಡಿ ಹಿರಿಮೆ ಚೀತ್ಕಾರ
ಭಾವಗಳನ್ನು ಪದಗಳಲ್ಲಿ ಸಿಕ್ಕಿಸುವಾಗ ಕೆಲವು ಗೊಂದಲಗಳು ಕಾಣುತ್ತಿವೆ.... ಇದು ನಿಮ್ಮ ಪ್ರತಿಭೆಯನ್ನು ಪ್ರಶ್ನಿಸಿದ ಅವಸರದ ಕವಿತೆ....
ReplyDeleteಒಳ್ಳೆಯ ಕವನ.
ReplyDelete