ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 20 May 2012

ಒಂದಷ್ಟು ಕಟ್ಟಲೆಗಳು...


1.
ನೂರಾರು ಜೊತೆ ಚಪ್ಪಲಿಗೊಬ್ಬ
ಕಾವಲುಗಾರ
ದೇವಸ್ಥಾನದೆದುರು
ಭಗವಂತನ ಪಾದರಕ್ಷೆಯ
ಮೇಲೆ ಅಡರಿದ್ದ ಕುಂಕುಮ ಹಣೆಗೊತ್ತಿತು
ಪುಣ್ಯವಂತನವನು, ಕಣ್ಬಿಟ್ಟ ದೇವರು!

2.
ಮೈಮೇಲೆ ಬಟ್ಟೆಯಿರಲಿಲ್ಲವಾಕೆಗೆ
ಒಂದು ಕಡೆ ಫ್ಯಾಷನ್
ಮತ್ತೊಂದೆಡೆ ದಾರಿದ್ರ್ಯ
ಬಂದ ಸನಾತನ ಪ್ರಭು
ಮುಖ ಮುಚ್ಚಲು, ಧರ್ಮ ಒದರಿದ ಹೃದ್ಯ!

3.
ಮೊದಲ ಪೂಜೆ ಗಣಪತಿಗೆ
ಸಲ್ಲಿಸಿದ ಭಕ್ತಿ ಕಾಣಿಕೆ ದೇವರಿಗೆ
ಇದ್ದದ್ದೊಂದೇ ಗಣೇಶ ಬೀಡಿ
ಸೇದುಗಿದು ಬೀಸಿದ ಕಾಗದ
ತೂರಿ ಬಿತ್ತು ಮೂತ್ರ ಕೋಟೆ ಗೋಡೆಗೆ
ಅಲ್ಲೂ ಆತ ತೆಪ್ಪಗಿದ್ದ!

4.
ಅಸಹಾಯಕ ಭಿಕ್ಷುಕನಿಗೆ
ಇಲ್ಲ ಚಿಲ್ಲರೆ!
ಆತ ಹುಂಡಿಗೆ ಇಳುಗಿಸುವುದು
ಯಾವಾಗಲೂ ಐನೂರೆ!
ಒಬ್ಬ ಬೇಡಿ ಭಿಕ್ಷುಕ
ಮತ್ತೊಬ್ಬ ನೀಡಿ ಭಿಕ್ಷುಕ!

5.
ಆ ದೇವಸ್ಥಾನದೊಳಗೆ
'ಅ' ಜಾತಿಯವರಿಗೆ ಪ್ರವೇಶವಿಲ್ಲ!
'ಆ' ಜಾತಿಯವರು ಮಾಡಿದ ನಿಯಮ
ಈ 'ಆ' ಜಾತಿಯವರು
'ಅ' ಜಾತಿಯವರೂರಿನವರೆ
ಮೂಗಿಗೆ ಗೋಡೆ ಹಾಕಿರಲಿಲ್ಲ
ಗಾಳಿ ಸೇವನೆಗೆ ಸಡಿಲ ನಿಯಮ!

6.
ಸ್ತ್ರೀ ಪ್ರವೇಶವಿಲ್ಲದ ದೇವಸ್ಥಾನ
ಒಬ್ಬಾಕೆ ದೇವರನ್ನು
ಮುಟ್ಟಿದ್ದಳಂತೆ!
ಆದರೂ ಆಕೆ ಗಂಡಾಗಲಿಲ್ಲ!
ದುಂಡಾಗಿ ಚೆನ್ನಾಗೇ ಇದ್ದಾಳೆ!

2 comments:

  1. ಪ್ರತಿಯೊಂದರಲ್ಲೂ ಗಾಢ ವಿಡಂಭನಾತ್ಮಕತೆಯು ಎದ್ದು ಕಾಣುತ್ತಿದೆ. ದೇವರು ಕಲ್ಲಾಗಿರುವ ವರೆಗೂ ಇಂತಹ ಪ್ರಶ್ನೆಗಳು ನಿರಂತರ.

    ಕಡೆ ಚರಣವಂತೂ ಪೊಳ್ಳಿನ ಸಾಕ್ಷಾತ್ಕಾರ. ಸಿಕ್ಸರ್

    ReplyDelete