ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday, 1 May 2012

ಹುತ್ತ...


ನಿನ್ನ ಕಟ್ಟಿದ್ದು ಗೆದ್ದಲು
ಆದರೂ ನಿನಗೆ ಸೋಲು
ರಂಧ್ರ ಹೊತ್ತ ಹುತ್ತ
ನಿನ್ನ ಸುತ್ತ ಹಾವುಗಳ ಚಿತ್ತ!

ಪರಿ ಪರಿ ನಾಗರ
ಪರದಾಡುತ ಸೇರಿಕೊಂಡಿವೆ ಬಿಲ
ರಂಧ್ರಗಳಲ್ಲಿಡು ಲಾಂದ್ರ
ಪರಿಷ್ಕರಿಸಿ ಬಿಡು ಸಕಲ!

ರಂಧ್ರ ಹೊತ್ತ ಹುತ್ತವೆ
ರಂಧ್ರಗಳೇ ನಿನ್ನ ಬಲಹೀನತೆ
ಎಚ್ಚರಿಕೆಯಿರಲಿ ಹಾವುಗಳೆಡೆ
ಇಟ್ಟುಕೋ ಬದುಕಿಗೆ ಒಂದು ತಡೆ!

1 comment:

  1. ದೇಹ ಪೂರ್ತಿ ತಡವಿಕೊಂಡೆ... ಸುಮಾರು ರಂಧ್ರಗಳಿವೆ ದೇಹದ ಹುತ್ತದೊಳಗೆ...

    ReplyDelete