ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday, 30 November 2011

ಕಾಣಿಸಿಕೊಂಡ...

ಚೂರು ಕಾಗದ ಸಾಕು
ಕಾಣದ ಗಾಳಿಯರಿಯಲು
ಮಿಣುಕು ದೀಪ್ತಿಯಲ್ಲಿದೆ
ಅದರೊಡಲ ನಿಜ ಶಕ್ತಿ

ತಂತಿಯೊಂದನ್ನಿಟ್ಟುಕೊಂಡು
ಮನೆಗೆ ಬೆಳಕ ತಂದ
ಚಿನ್ನದ ಹಾಳೆಯಲ್ಲಿ
ಅಣು ಬೇಧಿಸಿದಾತ

ಮೂರು ನಿಮಿಷವನ್ನು
ಮೂರು ದಿನ ಮಾಡಿದನೊಬ್ಬ
ಮೂರು ದಿನವನ್ನೂ
ಮೂರು ನಿಮಿಷ ಮಾಡಿಹೋದ
ಕಾಣದ ಕಾಲದೊಡನೆ
ಎಷ್ಟೊಂದು ಆಟ

ಪ್ರಪಂಚವೇ ಆಶ್ಚರ್ಯಗಳ
ಮೂಟೆ, ನಾನೂ ಒಬ್ಬ
ಮರೆಮಾಚಿ ನಿಂದ ದೇವ
ಇರುವುದ ಹಿಡಿದು
ಇಲ್ಲದಿದುದ ಕಂಡ ಮಾನವ

ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಆ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು

9 comments:

 1. ಅರ್ಥವಾಗಲಿಲ್ಲ ??? ...

  ReplyDelete
 2. ನಿಮ್ಮ ಪ್ರತಿಕ್ರಿಯೆ ಖುಷಿ ತಂದಿತು. ನಿಮಗಾಗಿ ಮತ್ತೊಮ್ಮೆ ಗೀಚುತ್ತೇನೆ. ವಂದನೆಗಳು...

  ReplyDelete
 3. Vijaya Kumar Kumbhashi30 November 2011 at 04:26

  ಚೆನ್ನಾಗಿದೆ.

  ReplyDelete
 4. Bellala Gopinath Rao30 November 2011 at 04:28

  ಹೌದು
  ಸೃಷ್ಟಿಯ ವೈಚಿತ್ರ್ಯವೇ ಹಾಗೆ ಹುಡುಕಿದರೆ ಮಾತ್ರ ಸಿಗುವಂತೆ.
  ಕವಿತೆ ಖುಷಿ ಕೊಟ್ಟಿತು

  ReplyDelete
 5. Laxmi Kanth Nayak30 November 2011 at 04:28

  ಕವಿತೆಯಲ್ಲಿ ಗಾಂಭೀರ್ಯ ವಿಚಾರಗಳು ಅಡಕವಾಗಿವೆ. ಸೂಕ್ಷ್ಮ ಚಿಂತನೆಯಿಂದ ನೋಡಬೇಕು. ಇಷ್ಟವಾಯಿತು...

  ReplyDelete
 6. ವಸಂತ್ ಆರ್30 November 2011 at 04:29

  ಉತ್ತಮವಾಗಿದೆ....

  ReplyDelete
 7. ಉತ್ತಮ ವಸ್ತುವಿನಿಂದ ಕೂಡಿದ ಕವಿತೆ ... ಚೆನ್ನಾಗಿದೆ... ಶುಭದಿನ.

  ReplyDelete
 8. ಕಾಣಿಸಿಕೊ೦ಡ

  ಚೂರು ಕಾಗದ ಸಾಕು
  ಕಾಣದ ಗಾಳಿಯರಿಯಲು
  ನಿಮ್ಮ ಕಲ್ಪನೆ ನಿಜವಾಗಲೂ
  ಅದ್ಬುತ ಸರ್

  ReplyDelete
 9. ಅರ್ಥಗರ್ಭಿತ ಸಾಲುಗಳು ಗಟ್ಟಿ ಪದಗಳೊಂದಿಗೆ ಲಾಸ್ಯವಾಡಿದೆ. ವಂದನೆಗಳು ಮೋಹನಣ್ಣ.

  ReplyDelete