ಕವಿತೆಗಳ ಹಾದಿಯಲ್ಲಿ ಸಾಗಿರುವ ನಿಮ್ಮ ಬಂಡಿಯಲ್ಲಿ ಕುಳಿತುಕೊಳ್ಳಲು ಒಂದಿನಿತು ಜಾಗ ನೀಡಿ, ದುಡ್ಡು ಕೇಳಲು ನೀವು ಬಂಡಿಯ ನಿರ್ವಾಹಕನಲ್ಲ, ನೀಡಲು ನಾನೇನು ಪ್ರಯಾಣಿಕನಲ್ಲ ಸ್ನೇಹದ ಕೊಂಡಿಯಲ್ಲಿ ನೀವು ತೂಗುತಿದ್ದಿರಿ, ಆತ್ಮೀಯನಿಗೆ ಬೇಸರವಯಿತೇನೋ ಎಂದೆನಿಸಿ ನಾನೂ ಕೂಡಿಕೊಂಡೆ...
ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!
Monday, 5 December 2011
ಕೆಲವು ಜಿಜ್ಞಾಸೆಗಳು (ಹಾಗೇ ಸುಮ್ಮನೆ)
ಉಪ್ಪಿಗೆರಡರ್ಥ
ಒಂದು ಉಪ್ಪು, ಮಗದೊಂದು ರುಚಿ
ಸಪ್ಪೆಗೇಕೊಂದರ್ಥ!
ವಿರುದ್ಧಾರ್ಥಕವೇ?
ಹಾಗಾದರೆ ನಾಲಗೆ ಹೇಳಿದ್ದು ಹುಸಿಯೇ?
ಸಪ್ಪೆಯಪ್ಪನಾರು?
ಬಿಸಿಲಿನಲ್ಲೊಮ್ಮೆ ನಿಂತು
ಕರಿಯ ಕರಿಯನಾದ
ಬಿಳಿಯನೂ ಕರಿಯನಾದ
ಹಾಗಾದರೆ ಗೌರವವರ್ಣ?
ಕಪ್ಪಾಗುವು ಬಿಳಿಯೋ
ಬಿಳಿಯಾಗದ ಕಪ್ಪೋ?
ಚೂರು ಬಿಡದೇ
ಬೆಳಕನ್ನು ಕತ್ತಲೆ ನುಂಗುವುದು
ನಾಲ್ಕು ಗೋಡೆ ಇದ್ದರೆ ಸಾಕು
ಬೆಳಕಿಗೆ ದಾರಿಯಿಲ್ಲ
ಕತ್ತಲೆಯದೇ ಜಯ
ಕಣ್ಣಾ ಮುಚ್ಚಾಲೆಯಾಟದಲ್ಲಿ
ಬಟ್ಟಲ ತಣ್ಣನೆ ನೀರು
ದಾಹ ನೀಗಿಸಿತು
ಅದೇನು ದಾಹ?
ಗಾಯಕ್ಕೊಂದು ಅಳು
ನಗುವಿನ ನಾವಿಕ?
ನಮ್ಮ ಕೊಲೆಪಾತಕ?
ಜಗದ ಆವೇಗ
ಬೆಳಕಿನ ವೇಗಕ್ಕೆ ಸಿಗದ ರಾಗ
ಬೂದಿ ಉಡುಗಿ ಮುಟ್ಟಲು
ಕೆಂಡದೊಳಗಣ ಬಿಸಿ
ಮುಟ್ಟಿದ್ದು ಕಾಣದಿದ್ದರೆ
ಮನವೇ ಜಿಜ್ಞಾಸೆಯ ಮೂಟೆ
Subscribe to:
Post Comments (Atom)
ಎಲ್ಲರನ್ನೂ ಜಿಜ್ಞಾಸೆಗಳು ಕಾಡುತ್ತವೆ.. ನಿಮಗೆ ಬಹುವಾಗಿ ಕಾಡಿದ ಜಿಜ್ಞಾಸೆಗಳಿಗೆ ಒಂದು ಚೌಕಟ್ಟು ಒದಗಿಸಿ ಒಂದು ಸುಂದರ ಕವಿತೆಯನ್ನಾಗಿ ಮಾಡಿದ ನಿಮ್ಮ ಪ್ರಯತ್ನ ಶ್ಲಾಘನೀಯ.. ತುಂಬಾ ಹಿಡಿಸಿತು ಮೋಹನಣ್ಣ..:))) ಪ್ರತಿಯೊಂದು ಸಾಲುಗಳಲ್ಲೂ ವಿಧ-ವಿಧದ ಜಿಜ್ಞಾಸೆಗಳ ಬಗ್ಗೆ ಹೇಳುವಾಗ ನಮ್ಮನ್ನೂ ಆ ಜಿಜ್ಞಾಸೆಗಳು ಕೊರೆಯುತ್ತವೆ, ನನ್ನ ಪ್ರಕಾರ ಒಬ್ಬ ಕವಿಯ ಸಾರ್ಥಕ್ಯ ಇರುವುದೇ ಅಲ್ಲಿ ಓದುಗನಲ್ಲಿಯೂ ಕವಿಯ ಭಾವನೆಗಳು ಮೂಡಿ ನಿಂತಾಗ.. ನೀವು ಆ ವಿಷಯದಲ್ಲಿ ಒಬ್ಬ ಪ್ರಬುದ್ಧ ಕವಿ.. ಸೂಕ್ಷ್ಮ ವಿಷಯಗಳನ್ನು, ಅವುಗಳ ಸೂಕ್ಷ್ಮತೆಯ ಇಂಬಿನೊಳಗೆ ಸುಂದರವಾಗಿ ಕಟ್ಟಿ ಕೊಡುತ್ತೀರಿ.. ಇನ್ನಷ್ಟು ಬರೆಯಿರಿ..:)))
ReplyDeleteನಿಮ್ಮ ಈ ಕವಿತೆಯ ಜಿಜ್ಞಾಸೆಗಳು... ವಿಚಾರವಂತಿಕೆಯ ಮಟ್ಟವನ್ನು ಹೆಚ್ಚಿಸುವ ಚಿಂತನೆಗಳು... ಅತೀ ಸೊಗಸಾಗಿ ರಚಿಸಿದ್ದೀರಾ.. :)
ReplyDelete