ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday, 11 December 2011

ಎಲ್ಲಿಂದ ಎಲ್ಲಿಗೆ??

ಕ್ಷಣಿಕ ಸುಖದಾಸರೆಗೆ
ಎರಡು ಚೈತನ್ಯ ಕಲೆತು
ಜೀವವೊಂದು ನಲಿಯಿತು
ಎಲ್ಲಿತ್ತು? ಕಾಡುವ ಪ್ರಶ್ನೆ

ಬಂದ ಜೀವ ಸಾವಿಗೆ ಕಾದು
ಬೊಗಸೆ ನೀರಲಿ ಜೀವ ಕಂಡು
ಹಸಿವಿನ ತ್ರಾಣಕ್ಕೆ ಅನ್ನವಿಕ್ಕಿ
ಉಪ್ಪಿಗೆ ನಾಲಗೆ ಚಪ್ಪರಿಸಿ
ಕಾಮ ಕ್ರೋದಕ್ಕೆ ಬಲಿಯಾಗಿ
ಎದ್ದು ಬಿದ್ದು ಓಡುತ್ತಿತ್ತು
ಅರಿವಿಗೆಟುಕದ ಮತ್ತೊಂದು ಪ್ರಶ್ನೆ

ಹೀಗೆ ಎರಡು ದಿನ ಸಾಗಿರಲು
ಮೂರನೇ ದಿನ ಬೆನ್ನು ಬಾಗಿ
ಕತ್ತಿನಿಂದ ನೊಗ ಕಳಚಿ
ಸುಸ್ತಾಗಿ ಬಿದ್ದಿರಲು, ಶಯನ
ಇಲ್ಲಿಗೆ ಬಂದದ್ದೋ ಏಕೋ ಏನೋ
ತಿಳಿಯದೆ ಹೊರಟಿತು ಜೀವನ್ಮರಣ
ಎಲ್ಲಿಗೆ? ಮತ್ತೆ ಕಾಡುವ ಪ್ರಶ್ನೆ

1 comment:

  1. ಹಲ ತಂತು ಮೀಟಿಟ್ಟ ಕಾವ್ಯ. ಒಂದಿಡೀ ಜೀವ ಚಕ್ರವನ್ನು ತಕ್ಕಡಿಯಲಿಟ್ಟು ತೂಗಿದ ಅಪರೂಪದ ಕವನ.

    ReplyDelete