ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday, 30 December 2011

ಓ ಮನಸೆ....

ಓ ಮನಸೆ, ನನ್ನ ಕನಸೆ
ಒಮ್ಮೆ ನೀ ನಗು
ಹಡೆ ನೆಮ್ಮದಿಯೆಂಬ ಮಗು
ಹೋದದ್ದು ಹೋಗಲಿ
ಆಗುವುದೆಲ್ಲ ಆಗಲಿ
ಮಳೆ ಹನಿಗಳೊಂದಿಗೆ ಬೆರೆತು
ಕುಣಿ ಕುಣಿದು ಅತ್ತುಬಿಡು

ನೀನೆ ನನ್ನ ನಗು ಎಂದವರು
ಹೃದಯದಲ್ಲಲೆಯೆಬ್ಬಿಸಿಬಿಟ್ಟರು
ಅದನ್ನು ಬಲ್ಲೆ, ಆದರೂ
ಯಾರೋ ಮುಡಿದ ಹೂ
ನಿನಗೇತಕೆ?
ದಿಗಂತದಾಚೆಗೆ ತೇಲಿಹೋಗಿ
ಒಬ್ಬನೇ ಕುಳಿತೊಮ್ಮೆ ನಕ್ಕುಬಿಡು

ಬಾಳು ಬದುಕಲು ಬಿಡುತ್ತಿಲ್ಲ
ಎಂಬ ನಿನ್ನ ದೂರು
ಒಪ್ಪದ ತಕರಾರು
ಮುಂದಿನ ದಾರಿಯಲ್ಲಿ
ಸಾವಿರ ಮುಳ್ಳಿದ್ದರೇನು
ಕಬ್ಬಿಣದ ಚಪ್ಪಲಿ ಹಾಕಿಕೊಂಡು
ಹಾಗೆ ಹೊಸಕಿಬಿಡು

ನಿನ್ನ ಸುತ್ತ ಹೂ ಚೆಲ್ಲುತ್ತಿದೆ
ಹಸಿರ ರಾಶಿ, ಮೇಘವರ್ಷ
ಕೈ ಹಿಡಿಯಲು
ಎದೆ ಚುಚ್ಚಲು ಯಾರೂ ಇಲ್ಲ
ನಿನ್ನದೇ ಲೋಕ
ನಿನ್ನವರು, ದೂರದಲ್ಲಿ
ನಗುತಿರುವರು
ಅವರ ಪಾಡಿಗವರಿರಲಿ
ನಿನ್ನ ಪಾಡಿಗೆ ನೀನೊಮ್ಮೆ ನಕ್ಕುಬಿಡು
ಪ್ಲೀಸ್....

4 comments:

 1. ಅತ್ಯುತ್ತಮ ಸಂತೈಕೆ ಕವಿತೆ. ಪದ ಲಾಲಿತ್ಯ ಮತ್ತು ಭಾವ ಪೂರ್ಣ.

  ಆಕೆ ಮನಸು ನಿರ್ಮಲ ಗಂಗೆಯಾಗಲಿ.

  ReplyDelete
 2. ಭಾವಗೊಂಚಲಿನಿಂದ ಉದುರಿ ಬಂದ ಒಂದು ಪಕ್ವ ಮತ್ತು ಕೋಮಲ ಕವಿತೆ.
  ನಿನ್ನ ಸುತ್ತ ಹೂ ಚೆಲ್ಲುತ್ತಿದೆ
  ಹಸಿರ ರಾಶಿ, ಮೇಘವರ್ಷ
  ಕೈ ಹಿಡಿಯಲು.....ಈ ಮಧುರ ಸಿಂಚನ ನೀಡುವ ಸುಂದರ ಭಾವನೆಯು ಚಿತ್ತಾಕರ್ಷಕ.ಆದರೆ
  ಎದೆ ಚುಚ್ಚಲು ಯಾರೂ ಇಲ್ಲ ಎನ್ನುವ ನೋಟ ಮಾತ್ರ ಏಕೋ ಕಳವಳ ನೀಡಿದಂತೆ ಭಾಸವಾಗುವುದು.
  ಅವರ ಪಾಡಿಗವರಿರಲಿ
  ನಿನ್ನ ಪಾಡಿಗೆ ನೀನೊಮ್ಮೆ ನಕ್ಕುಬಿಡು
  ಪ್ಲೀಸ್....
  ..............ಈ ನುಡಿ ಸಾಂತ್ವನವು ಮನಸಿಗೆ ಹಗುರತೆಯ ಸ್ಪರ್ಷವೊದಗಿಸಿ ಮನ ಅರಳಿಸುವಂತೆ ಮಾಡಿದೆ.ಒಂದು ಮನದ ಸುಂದರ ಕನವರಿಕೆ.ಇಷ್ಟವಾಯಿತು.

  ReplyDelete
 3. Thank you Mounaraaga and others... Wish you the same... Be happy forever... :)

  ReplyDelete